ಇಂದ್ಯಾಕೆ ತೊರೆದೆ ಹೇಳು
ನೀನಿರದೆ ಇಹುದೆ ಬಾಳು
ನೀನು ನಾನು ಒಟ್ಟಿಗೆ ಕೂತು ಬಿತ್ತಿದ,
ಕನಸಿನ ಬೀಜಗಳೆಲ್ಲ ಇನ್ನು ಹಸಿಮಣ್ಣಿನಲ್ಲೆ ಇರುವಾಗ
ಹಾಗೆಯೇ ಎದ್ದು ಹೋದೆಯಲ್ಲಾ..
ಕನಸು ಕಂಡಿದ್ದೆವು ನಮ್ಮ ಪ್ರೀತಿಯ ಗಿಡದ ಬಗ್ಗೆ
ಅದು ಮುಂದೆ ಹೆಮ್ಮರವಾಗಿ ಬೆಳೆದು
ರೆಂಬೆಕೊಂಬೆಗಳನ್ನು ಚಾಚಿ ನೀಡುವ ಫಲಕ್ಕೂ
ಹೆಸರಿಟ್ಟು ಹಾಗೆಯೇ ಎದ್ದು ಹೋದೆಯಲ್ಲಾ..
ನೀನು ಬಿತ್ತಿದ ಬೀಜವೀಗ ಸೊರಗುತ್ತಿದೆ
ನಿನ್ನ ಪ್ರೀತಿಯಂಬ ನೀರು ಸಾಕು ಇದಕೆ
ಮರಳಿ ಬರಲಾರೆಯಾ?
ಇಂದ್ಯಾಕೆ ತೊರೆದೆ ಹೇಳು
ನೀನಿರದೆ ಇಹುದೆ ಬಾಳು
ನೀನು ನಾನು ಒಟ್ಟಿಗೆ ಕೂತು ಬಿತ್ತಿದ,
ಕನಸಿನ ಬೀಜಗಳೆಲ್ಲ ಇನ್ನು ಹಸಿಮಣ್ಣಿನಲ್ಲೆ ಇರುವಾಗ
ಹಾಗೆಯೇ ಎದ್ದು ಹೋದೆಯಲ್ಲಾ..
ಕನಸು ಕಂಡಿದ್ದೆವು ನಮ್ಮ ಪ್ರೀತಿಯ ಗಿಡದ ಬಗ್ಗೆ
ಅದು ಮುಂದೆ ಹೆಮ್ಮರವಾಗಿ ಬೆಳೆದು
ರೆಂಬೆಕೊಂಬೆಗಳನ್ನು ಚಾಚಿ ನೀಡುವ ಫಲಕ್ಕೂ
ಹೆಸರಿಟ್ಟು ಹಾಗೆಯೇ ಎದ್ದು ಹೋದೆಯಲ್ಲಾ..
ನೀನು ಬಿತ್ತಿದ ಬೀಜವೀಗ ಸೊರಗುತ್ತಿದೆ
ನಿನ್ನ ಪ್ರೀತಿಯಂಬ ನೀರು ಸಾಕು ಇದಕೆ
ಮರಳಿ ಬರಲಾರೆಯಾ?
ಇಂದ್ಯಾಕೆ ತೊರೆದೆ ಹೇಳು
ನೀನಿರದೆ ಇಹುದೆ ಬಾಳು
ಇಂದ್ಯಾಕೆ ತೊರೆದೆ ಹೇಳು
ReplyDeleteನೀನಿರದೆ ಇಹುದೆ ಬಾಳು.
ಚೆಂದ ಇದ್ದು ಸಿಂಧುಪುಟ್ಟಿ :)
:) ಧನ್ಯವಾದ ಕಿಣ್ಣಣ್ಣ :)
ReplyDeleteಅರೆ ಪುಟ್ಟಿ! ನೀನೂ ಕವಿತೆ ಬರೀತ್ಯಾ? ಗೊತ್ತಿತ್ತೇ ಇಲ್ಲೆ :) ಚೆನ್ನಾಗಿದ್ದು
ReplyDelete:) dhanyavada :)
ReplyDelete