ಅವನೊಬ್ಬ ಭಾರಿ ದೊಡ್ಡ ಸಂಗೀತ ವಿದ್ವಾಂಸ ....
ದೇಶ ವಿದೇಶಗಳಲ್ಲಿ ಅವನಿಗೆ ಸಾವಿರಾರು ಅಭಿಮಾನಿಗಳಿದ್ದರು..
ಅವನ್ ಶಿಷ್ಯ ವೃಂದ ಭಾರಿ ದೊಡ್ಡದಿತ್ತು . ಅವನು ಕಾಲಲ್ಲಿ ತೋರಿಸಿದ್ದನ್ನು ತಲೆಯ ಮೇಲೆ ಹೊತ್ತು ಮಾಡಲು ಜನ ಕಾದಿರುತ್ತಿದ್ದರು.....
ಅವನಿಗಿದ್ದಿದ್ದ ಒಂದು ಭಾರಿ ಆಸೆಯೆಂದರೆ ತನ್ನ ಒಬ್ಬನೇ ಮಗನನ್ನು ತನಗಿಂತಲೂ ದೊಡ್ಡ ಸಂಗೀತ ವಿದ್ವಾಂಸನನ್ನಾಗಿ ಮಾಡುವುದು.ತನ್ನ ಮಗನಿಗೆ ತನ್ನ ಸಂಗಿತದ ಜ್ಞಾನವನೆಲ್ಲಾ ಧಾರೆಯೆರೆದ. ಜಗತ್ತಿಗೆ ಮಗನ ಪ್ರತಿಭೆಯನ್ನು ತೋರಿಸಲು ದೊಡ್ಡ ಸಂಗೀತ ಕಛೇರಿಯನ್ನು ಹಮ್ಮಿಕೊಂಡ.ಕಛೇರಿಗೆ ಪತ್ನಿ ಹಾಗು ಮಗನ ಜೊತೆ ಹೊರಟಿದ್ದ ಕಾರು ಅಪಘಾತಕ್ಕಿಡಾಗಿ ಮಗ ಹಾಗು ಪತ್ನಿ ಮರಣಹೊಂದಿದರು. ಇವನೊಬ್ಬ ಬದುಕಿಕೊಂಡ
ಈಗ ಮನೆ ಖಾಲಿ ..ಮನಸ್ಸು ಖಾಲಿ ....
ಅವನ ಜೀವನದ ಶೃತಿ ತಪ್ಪಿದೆ ...
ಅವನು ಹಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದಾನೆ ....
