Saturday, January 10, 2015

ವೈದ್ಯೋ ನಾರಾಯಣೋ ಹರಿಃ ಎಂಬುದು ಸರಿ, ಆದರೆ ಅವರನ್ನು ಕಾಪಾಡುವುದು ಯಾರು ರೀ?


ನಾವು ವೈದ್ಯೋ ನಾರಾಯಣೋ ಹರಿಃ ಅಂತ ಹೇಳುತ್ತೇವೆ. ಖಾಯಿಲೆ ಬಂದವರಿಗೆ, ವಿವಿಧ ರೋಗಗಳಿಂದ ನರಳುತ್ತಿರುವವರಿಗೆ ಸೂಕ್ತವಾದ ಚಿಕಿತ್ಸೆ ನೀಡಿ ಗುಣ ಪಡಿಸುವ ಪುಣ್ಯದ ಕೆಲಸ ವೈದ್ಯರದ್ದಾಗಿದೆ.

ಆದರೆ ಇತ್ತೀಚೆಗೆ ರೋಗಿಗಳನ್ನು ಗುಣಪಡಿಸುವ ಹೆಸರಿನಲ್ಲಿ ಅನಗತ್ಯ ಪರೀಕ್ಶೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಮಾಡಿ, ಬೇಡದ ಮದ್ದು ನೀಡಿ ಅಮಾಯಕ ರೋಗಿಗಳಿಂದ ಹಣ ಸುಲಿಗೆ ಮಾಡುವ ವೈದ್ಯರು ಹಾಗೂ ಆಸ್ಪತ್ರೆಗಳೇ ಹೆಚ್ಚಾಗುತ್ತಿವೆ. ಕಡಿಮೆ ಬೆಲೆಯ ಮದ್ದನ್ನು ರೋಗಿಗಳಿಗೆ ನೀಡುವ ಬದಲು ಹಣದ ಆಸೆಗೆ ಖಾಸಗೀ ಮದ್ದು ತಯಾರಿಕಾ ಸಂಸ್ಥೆಗಳೊಂದಿಗೆ ಒಪ್ಪಂದ  ಮಾಡಿಕೊಳ್ಳುವ್ ವೈದ್ಯರು ಆ ಕಂಪನಿಯ ಮಾತ್ರೆಗಳನ್ನೇ ತೆಗೆದುಕೊಳ್ಳುವಂತೆ ಹೇಳುತ್ತಾರೆ.ಇದರಂತೆಯೇ ತಾವು ಹೇಳಿದ ಸ್ಥಳದಲ್ಲಿಯೇ ವಿವಿಧ ವೈದ್ಯಕೀಯ ಪರೀಕ್ಶೆಗಳನ್ನು ಮಾಡಿಸಿಕೊಳ್ಳುವಂತೆ ರೋಗಿಹಳಿಗೆ ಸೂಚನೆ ನೀಡುತ್ತಾರೆ. ಅನಗತ್ಯವಾಗಿದ್ದರೂ ಶಸ್ತ್ರಚಿಕಿತ್ಸೆ ಮಾಡುವುದು, ಐಸಿಯುವಿನಲ್ಲಿ ಬೇಡದಿದ್ದರೂ ವಾರಗಟ್ಟಲೇ ರೋಗಿಗಳನ್ನು ದಾಖಲು ಮಾಡಿಕೊಳ್ಳುವುದು ಇತ್ಯಾದಿ ಹತ್ತು ಹಲವು ರೀತಿಯಲ್ಲಿ ಜನರಿಂದ ಹಣ ವಸೂಲಿ ಮಾಡಲಾಗುತ್ತದೆ.

ಖಾಸಗೀ ಆಸ್ಪತ್ರೆಗಳದ್ದು ಈ ಗತಿಯಾದರೆ ಸರ್ಕಾರಿ ಆಸ್ಪತ್ರೆಗಳದ್ದು ಇನ್ನೊಂದು ಗೋಳು. ಗ್ರಾಮೀಣ ಭಾಗಕ್ಕೆ ಹೋಗಲು ಹೆಚ್ಚಿನ ವೈದ್ಯರು ಮುಂದೆ ಬರುವುದಿಲ್ಲ.ಹೀಗಾಗಿಯೇ  ವೈದ್ಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದನ್ನು ಕಡ್ಡಾಯ ಮಾಡುವ್ಂತಹ ಸ್ಥಿತಿಗೆ ನಾವು ತಲುಪಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲಿ  ಅಕಸ್ಮಾತ್ ವೈದ್ಯರು ಇದ್ದ್ರೂ ರೋಗಿಯನ್ನು ಉಪಚರಿಸಲು ಮೂಲಭೂತ ಸೌಕರ್ಯ, ಸಲಕರಣೆ ಹಾಗೂ ಮದ್ದಿನ ಅಭಾವವಿರುತ್ತದೆ. ಹೀಗಾಗಿ ರೋಗಿಗಳು ಬೇರೆ ಊರುಗಳಿಗೆ, ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದು ಅನಿವಾರ್ಯ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿ. ಇದನ್ನು ಭರಿಸಲಾಗದ ಸಾಮಾನ್ಯರು ಸೂಕ್ತ ಚಿಕಿತ್ಸೆಯಿಲ್ಲದೇ ಜೀವದ ಬೆಲೆ ತೆರುತ್ತಿರುವುದು ಖೇದಕರ.

ಎಲ್ಲಾ ಸರ್ಕಾರಿ ಹಾಗೂ ಆಸ್ಪತ್ರೆಗಳು ಕೆಟ್ಟದಾಗಿವೆಯೆಂದು ನಾನು ಹೇಳುತ್ತಿಲ್ಲ. ಕೆಲವೊಂದು ಆಸ್ಪತ್ರೆಗಳು ಅತ್ಯುನ್ನತ ಗುಣಮಟ್ಟದ ಸೇವೆಯನ್ನು ನೀಡುತ್ತಿವೆ. ಆದರೆ ಇಂತಹ ಆಸ್ಪತ್ರೆಗಳ ಸಂಖ್ಯೆ ಬಹಳ ಕಡಿಮೆ. 

ದೇವರಿಗೆ ಸಮವೆಂದು ಭಾವಿಸುವ ವೈದ್ಯರೇ  ಯಮರೂಪಿಯಾಗಿ ಕಾಡಿದರೆ  ಸಾಮಾನ್ಯರು ಎಲ್ಲಿಗೆ ಹೋಗಬೇಕು? ವೈದ್ಯಕೀಯವು ಹಣ ಮಾಡುವ ದಂಧೆಯಗಿ ಮಾರ್ಪಾಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.

ಈ ಅವ್ಯವಸ್ಥೆಗೆ ನಾವು ಬರೀ ವೈದ್ಯವಲಯವನ್ನು ಸಂಪೂರ್ಣ ದೂರಿದರೆ ತಪ್ಪಾಗುತ್ತದೆ. ಒಬ್ಬ ವಿದ್ಯಾರ್ಥಿ ಎಂಬಿಬಿಎಸ್ ಪೂರ್ಣಗೊಳಿಸಲು ಸುಮಾರು ಆರು ವರ್ಶಗಳು ಬೇಕು. ಈಗ ಬರೀ ಎಂಬಿಬಿಎಸ್ ಮಾಡಿದರೆ ಸಾಲುವುದಿಲ್ಲ ಅದರ ಜೊತೆಗೆ ಸ್ನಾತಕೋತ್ತರ ಪದವಿ ಮಾಡಲೇ ಬೇಕು ಭಾರತದಲ್ಲಿರುವ  ಸಾವಿರಾರು ಎಂಬಿಬಿಎಸ್ ಸೀಟುಗಳಿಗೆ ಕೇವಲ ಹಲವು ನೂರು ಸ್ನಾತಕೋತ್ತರ ಸೀಟುಗಳು ಮಾತ್ರ ಲಭ್ಯವಿದೆ. ಆದ್ದರಿಂದ ಈ ಸೀಟುಗಳಿಗೆ ಸ್ಪರ್ಧೆ ಬಹಳವಿರುತ್ತದೆ. ಅಕಸ್ಮಾತ್ ಸೀಟು ಸಿಕ್ಕರೂ ಓದಿಸುವ ತಾಕತ್ತು ಮನೆಯವರಿಗಿರಬೇಕು ಇಲ್ಲಾ ಸಾಲ ಮಾಡಬೇಕು. ಅದಿಲ್ಲವಾದರೆ ಕೋಟ್ಯಾಂತರ ರೂ ಖರ್ಚು ಮಾಡಿ ಮ್ಯಾನೇಜ್.ಮೆಂಟ್ ಸೀಟು  ಪಡೆಯಬೇಕು ಅಥವಾ ವಿದೇಶಕ್ಕೆ ಹಾರಬೇಕು. ಇದಾವುದೂ ಮಾಡಲಾಗದೇ ಬೇರೆ ಕೆಲಸವೂ ಸಿಗದೇ ಮನೆಯಲ್ಲಿ ಕುಳಿತಿರುವ ಸಾವಿರಾರು ಎಂಬಿಬಿಎಸ್ ಪದವೀಧರರು ಮನೆ ಮನೆಯಲ್ಲಿ ನಮಗೆ ಸಿಗುತ್ತಾರೆ.

ಇಶ್ಟೆಲ್ಲಾ ಮಾಡಿಯೂ ಕೊನೆಗೆ ಇವರಿಗೆ ಸಿಗುವ ಸಂಬಳ ಈಗಿನ ಸಾಫ್ಟ್.ವೇರ್ ಇಂಜಿನೀಯರುಗಳು ಅಥವಾ ಸಾಮಾನ್ಯ ಪದವೀಧರರು ಪಡೆಯುವ ಸಂಬಳಕ್ಕಿಂತ ಕಡಿಮೆ. ಹೀಗಾಗಿ ಅವರು ಖಾಸಗೀ ಆಸ್ಪತ್ರೆಗಳ ಕಡೆಗೆ ಮುಖಮಾಡುತ್ತಾರೆ ಅಥವಾ ಬೇರೆ ರೀತಿಯಲ್ಲಿ ಹಣಮಾಡುವ ಯೋಜನೆಗೆ ಕೈ ಹಾಕುತ್ತಾರೆ.

ಒಬ್ಬ ವಿದ್ಯಾರ್ಥಿ ವೈದ್ಯನಾಗಬೇಕಾದರೆ ಕನಿಶ್ಟ 10 ವರ್ಶವಾದರೂ ಬೇಕು ಆ ಸಮಯದಲ್ಲಿ ಅವರ ಓರಗೆಯವರು ಬೇರೆ ಪದವಿಗಳನ್ನು ಪಡೆದು ಜೀವನದಲ್ಲಿ ನೆಲೆಗೊಂಡಿರುತ್ತಾರೆ. ಇವರು ಆಗಿನ್ನೂ ದುಡಿಯಲು ಆರಂಭಿಸಿರುತ್ತಾರೆ. ಓದಿಗಾಗಿ ಮಾಡಿದ ಸಾಲವನ್ನು ತೀರಿಸುವ ಬಗೆಯಾದರೂ ಹೇಗೆ? ತಮ್ಮ ಜೀವನ ರೂಪಿಸಿಕೊಳ್ಳುವುದು ಯಾವಾಗ? ಇದಕ್ಕೆ ಉತ್ತರವಿಲ್ಲ.

ಈ ಎಲ್ಲಾ ಸಮಸ್ಯೆಗಳಿಗೂ ಅಂತ್ಯ ಹಾಡುವುದು ಹೇಗೆ? ನಾವು ವೈದ್ಯೋ ನಾರಾಯಣೋ ಹರಿಃ ಎಂಬುದು ಸರಿ ಆದರೆ ಅವರನ್ನು ಕಾಪಾಡುವುದು ಯಾರು ರೀ? ವೈದ್ಯವಲಯ ಹಾಗೂ ರೋಗಿಗಳು ಇವರಿಬ್ಬರಿಗೂಅನ್ಯಾಯವಾಗದಂತೆ ತಡೆಯುವುದು ಹೇಗೆ?ಎಂಬುದೇ ನಮ್ಮ ಮುಂದಿರುವ ಪ್ರಶ್ನೆ.


Wednesday, January 8, 2014

The love of my life


Valentine's day is just a few days ahead and everyone has started making their plans already!
will she/he say yes? if so how is the date going to be like? or will I be sitting at home alone in my everlasting relationship with ice cream and television? these endless thoughts must be bugging people...

Let me tell you how my February is going to be..

"hey shadja! me and my guy are planing to go to a romantic place on valetine's..can you suggest some place?"

" I think I have a thing for this girl...can you set me up with her?"

I love being the Cupid but come on! I have to look after myself  too! I don't believe in celebrating love on one particular day. Love is an everyday celebration and everlasting happiness.

Love such a thing which can be shared with anyone or anything..So today I'm here to tell you guys about the love of my life.

I don't exactly remember the day we met but I know he came into my life when I was just stepping into the world. Since then he has never left my side.Its like we are destined to be with each other. Though he was a part of my life, it took a lot of years for me to realise he was the one. He was there when I was happy. He was there when I needed a shoulder to cry on. He accepted me for the way I am. No judgements no long lectures or moral policing.

Every time I see him, I see myself. When he kisses me, I'ts so hot that sometimes I get afraid that he might burn my lips. He moves from my lips to tongue playing all the way in.. that's when all my senses reach the peak and oh my god! I cannot describe how my body starts feeling then.He tastes like heaven and smells incredible. His touch lingers in my mind even when I'm far far away from him.

Dear Gobhi Manchurian, today I'm so happy to tell the world that you are the love of my life!. I don't know what I would have done or how I would have been If you weren't in my life by my side. You gave me strength and courage and made me who I am today. You are the reason I smile even when the world is falling apart. I will never ever leave you no matter what happens, no matter who comes into our lives. This is my word to you.

P.S. I love you <3

Saturday, January 4, 2014

FIRE

use it well, you create magic
play with it, you are burnt to death

gone are those days when 
i used it to light the lamp,
evil in me took over 
and kept me in the dark
forever and ever

sure! 
it's just an issue over a tissue!
but the agony when you are burnt alive
makes no compromise in killing you 
inch by inch, inside and out!

make no mistake my friend!
flames are necessary 
but can be deceiving!
A touch of sin is enough
to end it all
forever and ever..

Saturday, December 14, 2013

ಕವನ - ೫

ಕಾದಿಹಳು ರಾಧೆ ನೀಲ ಮೇಘ ಶ್ಯಾಮ ಸುಂದರನಿಗೆ

ಗೋಪಾಲ ಬಾಲನಿಗೆ ನೂರಾರು ಗೋಪಿಕೆಯರು
ಪ್ರೀತಿಯುಣಿಸಲು ಹಲವಾರು ದಾರಿಗಳು

ಸಾಟಿಯಿಲ್ಲವದು ನನ್ನ ಪ್ರೇಮಕೆ
ಅಖಂಡ, ನಿರ್ಮಲ, ನಿಷ್ಕಳಂಕ

ಕಪ್ಪೆಯ ಚಿಪ್ಪಿನೊಳಗೆ ಬಂಧಿತಳು ನಾನು
ಮುತ್ತಿನ ಮತ್ತನೂ ಮರೆತನೆ ಅವನು?

ಕಾದಿಹೆನು ನಾನು ನಿನ್ನ ಮುರಳಿನಾದಕೆ
ಅಡಿಯಿಡಲಾರೆಯಾ ಮನದ ಅಂಗಳಕೆ?
ಮತ್ತೆ ಮರಳಿ ಬರುವನೆಂದು
ಕಾದಿಹಳು ರಾಧೆ ನೀಲ ಮೇಘ ಶ್ಯಾಮ ಸುಂದರನಿಗೆ


Monday, October 21, 2013

Nightmare!


Thy Touch lingers in my mind
I felt thou in me as the sun rose over our head,

Oceans roared, rivers cried,
woods laughed, earth moved,

Left with a blank stare
I wish it was just a nightmare!

Monday, September 30, 2013

ಕವನ - ೪

ಸಂಪಿಗೆ!
ಕಡು ಕಾಡು ಸಂಪಿಗೆ!
ನನ್ನವಳ ಹಾಗೆಯೇ ತುಸು ಘಾಟು, ಕಂಪು
ಹೆಜ್ಜೆಗೆ ಗೆಜ್ಜೆ ಸೇರಿ ನನ್ನೆದೆಯಲಿ ನಿನಾದ
ಮನದ ಅಂಗಳದಿ ಅವಳದೇ ಪರಿಮಳ

ಮೊಗ್ಗು ಬಿರಿದು ಹೂವಾದಂತೆ 
ಅರಳುವಳು ನನ್ನ ಸಂಪಿಗೆ
’ನನ್ನ ಘಮ ನಿಮಗಷ್ಟೇ!’
ಎಂದು ನುಡಿವಳು ಕಣ್ಣಲ್ಲೇ!

ಎಲ್ಲರಿಗೂ ಪ್ರಿಯ ಮಲ್ಲಿಗೆಯ ಮಾಲೆ
ಮೃದು, ಹಗುರ ಸುವಾಸನಾ ಛಾಯೆ
ಸಾಟಿಯಿಲ್ಲವದು ಕಾಡು ಸಂಪಿಗೆಗೆ
ನನ್ನ ಕಡು ಕಾಡು ಸಂಪಿಗೆಗೆ!

ಓ ನನ್ನ ಕಾಡು ಸಂಪಿಗೆ!
ನೀನನ್ನನೇನೆನ್ನು ನಾನಿನ್ನನೇನೆನ್ನೆನು!

Monday, July 8, 2013

ಕವನ - 3

ನಾ ನಡೆಯುತ್ತಿದ್ದ ಹಾದಿ ಭಗ್ನಗೊಂಡಾಗ
ಹೊಸ ದಿಕ್ಕಿನೆಡೆ ಹೊರಳಿದ್ದು ಸಹಜ!
ಅನಿವಾರ್ಯ!

ಹೊಸದಿಕ್ಕಿನ ನವ ಪರಿಚಯ,
ನವ ಜೀವನ ಎಲ್ಲವೂ 
ಹೊಸತು, ಸೊಗಸು!

ಕಳೆದ ಹಾದಿಯ ನೆನಪು
ಬಿಡದೆ ಕಾಡುತಿರಲು
ಮನದಿ ಸಣ್ಣ ನೋವು!

ಹಳೆಯದನ್ನು ಬಿಡಲಾರದ
ಹೊಸದನ್ನು ಅಪ್ಪಿಕೊಳಲಾರದ
ಹೊಸಕಿದ ಹೂವು ನಾನು!

ಹಳೆಯ ಸಂಕೋಲೆ ಕಳಚಿ
ಬರುವ ಹಾದಿಯ ಮುಳ್ಳ ತೆಗೆದು
ಮತ್ತೆದ್ದು ನಿಲ್ಲಲು ಚೇತನವ ನೀಡು!
ಚೇತನವ ನೀಡು!