
ಕಾದಿಹಳು ರಾಧೆ ನೀಲ ಮೇಘ ಶ್ಯಾಮ ಸುಂದರನಿಗೆ
ಗೋಪಾಲ ಬಾಲನಿಗೆ ನೂರಾರು ಗೋಪಿಕೆಯರು
ಪ್ರೀತಿಯುಣಿಸಲು ಹಲವಾರು ದಾರಿಗಳು
ಸಾಟಿಯಿಲ್ಲವದು ನನ್ನ ಪ್ರೇಮಕೆ
ಅಖಂಡ, ನಿರ್ಮಲ, ನಿಷ್ಕಳಂಕ
ಕಪ್ಪೆಯ ಚಿಪ್ಪಿನೊಳಗೆ ಬಂಧಿತಳು ನಾನು
ಮುತ್ತಿನ ಮತ್ತನೂ ಮರೆತನೆ ಅವನು?
ಕಾದಿಹೆನು ನಾನು ನಿನ್ನ ಮುರಳಿನಾದಕೆ
ಅಡಿಯಿಡಲಾರೆಯಾ ಮನದ ಅಂಗಳಕೆ?
ಮತ್ತೆ ಮರಳಿ ಬರುವನೆಂದು
ಕಾದಿಹಳು ರಾಧೆ ನೀಲ ಮೇಘ ಶ್ಯಾಮ ಸುಂದರನಿಗೆ


