Saturday, October 27, 2012

ಕವನ - ೨

ಮಾಯಾ ಜಿಂಕೆ!!!

ಮೊದಮೊದಲು ಹಾಗೆ
ಕಣ್ಣಿಗೆ ಕಂಡದ್ದೆಲ್ಲಾ ಸುಂದರ, ಮನೋಹರ
ಜಿಂಕೆಯ ಬೆನ್ನು ಹತ್ತಿ
ಮಾಯಾ ಲೋಕಕ್ಕೆ ಪಯಣಿಸುವ ತವಕ

ಜಿಂಕೆಯ ಕಣ್ಣುಗಳೋ ಅಯಸ್ಕಾಂತದಂತೆ
ಫಳ ಫಳನೆ ಹೊಳೆಯುತ್ತ ಅದರೊಳಗೆ ನನ್ನನು
ಎಳೆದುಕೊಳ್ಳುವಷ್ಟು!!

ಅದರ ಮೈ ಬಹಳ ನುಣುಪು ಮಕಮಲ್ಲಿನಂತೆ
ಮುಟ್ಟಿದರೆ ನಾನು ಜಾರಿ ಅದರೊಳಗೆ 
ಸೇರಿಕೊಳ್ಳುವಷ್ಟು!!

ನಂತರ ತಿಳಿವುದು ಇದೆಲ್ಲ ಬರಿ ಭ್ರಮೆಯಂತೆ
ಹೆಸರಲ್ಲಿಯೆ ಇದೆ ಮಾಯೆ
ಬಿದ್ದರೆ ಮತ್ತೆದ್ದು ನಿಲ್ಲಲಾಗದಷ್ಟು!!