Wednesday, April 25, 2012

ನೆನಪು - ೧

ಯಾಕೊ ಗೊತ್ತಿಲ್ಲ ಕಣ್ರಿ ಇವತ್ತು ತುಂಬಾ ಅಳ್ಬೇಕು ಅಂತ ಅನಿಸ್ತಾ ಇದೆ.....
ಈ ಹಾಳಾದ್ ನೆನಪುಗಳನ್ನ ಸುಟ್ ಹಾಕೋ ಅಂಥ ಯಾವ್ದಾದ್ರು ಟೆಕ್ನಾಲಜಿ ಬಂದಿದ್ರೆ ಚನಾಗಿರ್ತಿತ್ತು ....
 ನಾನೇನ್ ತಪ್ಪು ಮಾಡಿದ್ದೆ??
ಮತ್ತೆ ಮತ್ತೆ ಆ ನೆನ್ಪು ಬಿಡದೆ ಕಾಡತ್ತೆ ನನ್ನ...
ನಿಜ! ನಾನು ಕೆಲವೊಂದ್ ಸಾರಿ ಅವಳತ್ರ ಸುಳ್ಳು ಹೇಳೀದ್ದೆ ಆದ್ರೆ ಸತ್ಯ ಮುಚ್ಹ್ಚಿಟ್ಟಿದ್ದು ಅವ್ಳು ನನ್ನನ್ ಬಿಟ್ ಹೋಗ್ತಾಳೆ ಅನ್ನೊ ಭಯದಿಂದ ಮಾತ್ರ ಕಣ್ರಿ.....ಪ್ರೀತಿಲ್ಲಿ ನಂಬಿಕೆ ಮುಖ್ಯ ಅಂತೆ, ಇಬ್ರ ಮಧ್ಯೆನು ಯಾವ್ದೇ ಮುಚ್ಚುಮರೆ ಇರಬಾರದಂತೆ ನಿಜಾ ಆದ್ರೆ ನಾನೇನ್ ಮಾಡ್ಲಿ ರೀ?? ಪರಿಸ್ಥಿತಿ ಹಂಗಿತ್ತು ....
ಕಾಲೇಜು ಮುಗ್ಸಿ ಪಾರ್ಕಿಗ್ ಕರ್ಕೊಂಡು ಹೋಗಿ, ಬುಟ್ಟಿ ತುಂಬಾ ಮಲ್ಲಿಗೆ ತಂದು ಅವ್ಳ ಕಾಲು ಮೇಲೆ ಸುರಿದು ಕ್ಷಮೆ ಕೇಳಿದ್ದೆ, ಐದು ಗಂಟೆ ಕೂತ್ಕೊಂಡು ಎಶ್ಟು ತರ ಅವ್ಳನ್ನ ಕನ್ವೀನ್ಸ್ ಮಾಡಕ್ಕೆ ಟ್ರೈ ಮಾಡ್ದೆ...ಒಪ್ಲೆ ಇಲ್ಲ ಕಣ್ರಿ ಅವ್ಳು.....
ಕಣ್ಣಿಂದ ಮುತ್ತು ಉದುರಿಸ್ತಾ "ಬೇರೆವ್ರು ತಪ್ಪು ಮಾಡಿದ್ರೆ ನನ್ನಿಂದ ಸಹಿಸಕ್ಕಾಗಲ್ಲ ಕಣೋ ನೀನ್ ಮಾಡಿದ್ ಸರಿ ಇಲ್ಲ. ಮತ್ತೆ ನಿನ್ ಬಗ್ಗೆ ನಂಗೆ ಆ ತರ ಭಾವನೆಗಳೇ ಹುಟ್ಟಲ್ವೊ ಪ್ಲೀಸ್ ಅರ್ಥ ಮಾಡ್ಕೊ ನಾವಿಬ್ರು ಒಳ್ಳೆ ಸ್ನೇಹಿತರಾಗಿ ಇರೋಣ್ವೊ ಪ್ಲೀಸ್ ಕಣೋ" ಅಂತ ಹೇಳೀ ಆ ಹೂವನ್ನ ತುಳ್ಕೊಂಡು ಹೊರ್ಟೇ ಹೋಗ್ಬಿಟ್ಲು ಕಣ್ರಿ.....
ಯಾಕೋ ಆವತ್ತು ಇಶ್ಟು ದಿನಾ ಅವ್ಳು ಮಾಡಿದ್ದೆಲ್ಲಾ ನಾಟಕ ಅನ್ನಿಸ್ಬಿಡ್ತು....
----------------------------------------------------------------------------------------------------------
ನಾಳೆ ಅವ್ಳ ಮಗ ಸಮರ್ಥನ್ ಮದ್ವೆ ....
ನಾರ್ಥ್ ಇಂಡಿಯನ್ ಹುಡ್ಗೀನ ಲವ್ ಮಾಡಿ ಮದ್ವೆ ಆಗ್ತಿದಾನೆ.....ಆಮೇಲೆ ಅಮೇರಿಕಾಗೆ ಹೋಗ್ತಿದಾನೆ....
 ಗಂಡ ತೀರ್ಕೊಂಡ್ ಮೇಲೆ ಅವನ್ನ ಓದ್ಸಕ್ಕೆ ತುಂಬಾ ಕಶ್ಟ ಪಟ್ಟಿದಾಳೆ ಕಣ್ರಿ ಅವ್ಳು ....
ಮನ್ಸಲ್ಲಿ ಕೆಂಡ ಇಟ್ಕೊಂಡು ಹೊರ್ಗಡೆ ಕೂಲಾಗಿ ಇರೋದು ಎಶ್ಟು ಕಶ್ಟ ಅಲ್ವೆನ್ರಿ???
ನಂಗೆ ಮದ್ವೆ ಮನೆ ಪೂರ್ತಿ ಜವಾಬ್ದಾರಿ ಕೊಟ್ಬಿಟಿದಾಳೆ . ಎಂದಿನಂತೆ ಇವತ್ತು , ಮುಂದೆ ಯಾವತ್ತೂ ಅವ್ಳಿಗೆ ಜೊತೆಯಾಗೆ ಇರ್ತೀನ್ರಿ.... ಸ್ನೇಹಿತನ್ ತರ ಆಕ್ಟ್ ಮಾಡಿ ಮಾಡಿ ಈಗ ಅಭ್ಯಾಸ ಆಗೋಗಿದೆ.....ಹಾಳಾದ್ದು ಇಶ್ಟು ವರ್ಷಾ ಆದ್ರು ಅವ್ಳನ್ ಮಾತ್ರ ಮನ್ಸಿಂದ ಹೊರಗಾಕಕ್ಕೆ ಆಗಿಲ್ಲ.....
ಅವ್ಳು ಮತ್ತೆ ನನ್ನ ಹೆಂಡತಿ ಇಬ್ರು ಆಗಿಂದ ಕರಿತಿದಾರೆ  ಇನ್ನು ಸುಮಾರು ಕೆಲ್ಸ ಬಾಕಿ ಇದೆ ಕಣ್ರಿ  ನಾನು ಹೋಗ್ತೀನಿ...
ತುಂಬ ಹೊತ್ತು ಮಾತಾಡಿಬಿಟ್ಟೆ......
ನಾಳೆ ನಮ್ಮ ಸಮು ಮದ್ವೆಗೆ  ಖಂಡಿತಾ  ಬನ್ನಿ ಆಯ್ತಾ.....
ನಿಮ್ಗೋಸ್ಕರ ಕಾಯ್ತಾ ಇರ್ತೀನಿ..........

2 comments:

  1. ವ್ಯಥೆಯೋ ಕಥೆಯೋ .. ಬರಹ ಚಂದ ಇದ್ದು.

    ನೆನಪುಗಳ ಮಾತು ಮಧುರ ! ಕೆಲವೊಮ್ಮೆ ಘೋರ :)

    ReplyDelete
  2. thanku kinnanna :) ನೆನಪುಗಳು ಇಲ್ದಿದ್ರೆ ಜೀವನದಲ್ಲಿ ಮಜ ಇರೋದಿಲ್ಲ ಅಲ್ವೆ :)

    ReplyDelete