ಸಂಪಿಗೆ!
ಕಡು ಕಾಡು ಸಂಪಿಗೆ!
ನನ್ನವಳ ಹಾಗೆಯೇ ತುಸು ಘಾಟು, ಕಂಪು
ಹೆಜ್ಜೆಗೆ ಗೆಜ್ಜೆ ಸೇರಿ ನನ್ನೆದೆಯಲಿ ನಿನಾದ
ಮನದ ಅಂಗಳದಿ ಅವಳದೇ ಪರಿಮಳ
ಮೊಗ್ಗು ಬಿರಿದು ಹೂವಾದಂತೆ
ಅರಳುವಳು ನನ್ನ ಸಂಪಿಗೆ
’ನನ್ನ ಘಮ ನಿಮಗಷ್ಟೇ!’
ಎಂದು ನುಡಿವಳು ಕಣ್ಣಲ್ಲೇ!
ಎಲ್ಲರಿಗೂ ಪ್ರಿಯ ಮಲ್ಲಿಗೆಯ ಮಾಲೆ
ಮೃದು, ಹಗುರ ಸುವಾಸನಾ ಛಾಯೆ
ಸಾಟಿಯಿಲ್ಲವದು ಕಾಡು ಸಂಪಿಗೆಗೆ
ನನ್ನ ಕಡು ಕಾಡು ಸಂಪಿಗೆಗೆ!
ಓ ನನ್ನ ಕಾಡು ಸಂಪಿಗೆ!
ನೀನನ್ನನೇನೆನ್ನು ನಾನಿನ್ನನೇನೆನ್ನೆನು!

ಓ ನನ್ನ ಕಾಡು ಸಂಪಿಗೆ!
ReplyDeleteನೀನನ್ನನೇನೆನ್ನು ನಾನಿನ್ನನೇನೆನ್ನೆನು? :)
:) ಮನುಷ್ಯ ಬದಲಾದರೂ ಭಾವನೆ ಬದಲಾಗದು ಅಲ್ವೆ? :)
ReplyDeleteಏಕೆ ಕಾಡುತಿದೆ ಸಂಪಿಗೆ? ಹೆಸರೇ ಕಾಡು ಸಂಪಿಗೆ..
ReplyDeleteಚಂದ ಬರದ್ದೆ ಪುಟ್ಟಿ :)