ನಾ ನಡೆಯುತ್ತಿದ್ದ ಹಾದಿ ಭಗ್ನಗೊಂಡಾಗ
ಹೊಸ ದಿಕ್ಕಿನೆಡೆ ಹೊರಳಿದ್ದು ಸಹಜ!
ಅನಿವಾರ್ಯ!
ಹೊಸದಿಕ್ಕಿನ ನವ ಪರಿಚಯ,
ನವ ಜೀವನ ಎಲ್ಲವೂ
ಹೊಸತು, ಸೊಗಸು!
ಕಳೆದ ಹಾದಿಯ ನೆನಪು
ಬಿಡದೆ ಕಾಡುತಿರಲು
ಮನದಿ ಸಣ್ಣ ನೋವು!
ಹಳೆಯದನ್ನು ಬಿಡಲಾರದ
ಹೊಸದನ್ನು ಅಪ್ಪಿಕೊಳಲಾರದ
ಹೊಸಕಿದ ಹೂವು ನಾನು!
ಹಳೆಯ ಸಂಕೋಲೆ ಕಳಚಿ
ಬರುವ ಹಾದಿಯ ಮುಳ್ಳ ತೆಗೆದು
ಮತ್ತೆದ್ದು ನಿಲ್ಲಲು ಚೇತನವ ನೀಡು!
ಚೇತನವ ನೀಡು!

ಬರುವ ಹಾದಿಯಲ್ಲಿ ಮುಳ್ಳಿರುತ್ತದೆ ಎನ್ನುವ ಭಾವ ಸರಿಯಲ್ಲ.!!
ReplyDelete