Sunday, April 29, 2012

ಕುಕುಂಬರ್


ಅಬ್ಬಾಆಆಆಆಆಆಆಆಆಆಆ ಏನ್ ಬಿಸ್ಲೋ ಬಿಸ್ಲು !!!!!!!!! ಈ ಮಂಥ್ನಲ್ಲೆ ಹಿಂಗೆ ಇನ್ನು ಮೇ ಬಂದ್ರೆ ಇನ್ನೆಂಗೋ!! ಈ ಹಾಟ್ ಸೀಸನ್ನಲ್ಲಿ  ಇರಕ್ಕಗಲ್ಲಾಪ್ಪಾ ನಂಗಂತು ದಿನಾ ಕುಕುಂಬರ್ ಫೇಸ್ ಪ್ಯಾಕ್ ಹಾಕೊಳ್ದೇ ಇರೋದಿಕ್ಕೆ ಆಗಲ್ಲಾರೀ!!    ರೂಮಿಗ್ ಒನ್ನೊಂದ್ ಏಸಿ ಹಾಕ್ಸಿದ್ರು ಸಾಕಾಗಲ್ಲಾ ತುಂಬಾ ಸ್ವೆಟ್ ಆಗ್ಟೀವಿ  ಯು ಸೀ ಸುಮ್ನೆ ನಮ್ಮ ಡಿಸೈನೆರ್ ಕ್ಲಾಥ್ಸ್ ಹಾಳಾಗತ್ತೆ..... ಪಾಪ ನನ್ ಡಾಟರ್ ಎಶ್ಟೂಂತ ಒದ್ದಾಡ್ಬೇಕು ಒಂದಿನಾ ರಾತ್ರಿ ಏಸಿ ಸ್ವಲ್ಪ ಪ್ರಾಬ್ಲಮ್ ಆಗಿದ್ದಕ್ಕೆ ಪಾಪ ಮಾರ್ನೆ ದಿನ ಅವ್ಳ ಮುಖನೆ ನೋಡಕ್ಕಾಗ್ತಿರ್ಲಿಲ್ಲ  ಸುಲೇಖಾ!!  ಅದ್ಕೆ ಈಡೀ ಮನೆಗೆ ಸೆಂಟ್ರಲೈಸೆಡ್ ಏಸಿ ಹಾಕ್ಸಣಾ ಅಂತ ನಾನು ಹಬಿ ಇಬ್ರು ಯೋಚ್ನೆ ಮಾಡಿದೀವಿ .....
ಸುಲೇಖಾ ಐಸ್ ಟೀ ತೊಗೊಳ್ರಿ ಹಾಗೇ ಇಟ್ಟಿದೀರಾ ಈ ವೆದರ್ಗೆ ಇದು ತುಂಬಾ ಒಳ್ಳೇದು... ಮತ್ತೆ ನಿಮ್ಮಗನ್ ಟ್ವೆಂಟಿ ಪಸ್ಟ್ ಬರ್ಥಡೇಗೆ ಬಿ.ಎಮ್.ಡಬಲ್ಯು ಕಾರ್ ಕೊಡ್ಸಿದ್ರಂತೆ ವಾವ್!! ಯು ಮಸ್ಟ್ ಲವ್ ಯುವರ್ ಸನ್ ವೆರಿ ಮಚ್.  ಯು ನೋ ನಮ್ ಸೋನು ಪುಟ್ಟಿದು ಟೆಂಥ್ ಬರ್ಥ್ ಡೇ ನೆಕ್ಸ್ಟ್ ಮಂಥ್ ಅದ್ಕೆ ನಾವು ಲೀಲಾ ಪ್ಯಾಲೆಸ್ ನಲ್ಲಿ ಗ್ರಾಂಡ್ ಪಾರ್ಟಿ ಅರೇಂಜ್ ಮಾಡಿದೀವಿ ಅದ್ಕೆ ಅವ್ಳಿಗೆ ಅಂತಾ ಡೈಮಂಡ್ ಸೆಟ್ ಪರ್ಚೇಸ್ ಮಾಡಿಡೀವಿ ಫೇಮಸ್ ಡಿಸೈನರ್ ಮನೀಷ್  ಇದಕ್ಕೋಸ್ಕರಾ ಸ್ಪೆಷಲ್ಲಾಗಿ ಡ್ರೆಸ್ ಡಿಸೈನ್ ಮಾಡಿದಾರೆ ಸೋನುಗೆ...... ನೀವು ಬರ್ದೆ ಇರ್ಬೇಡಿ ಏನೇನ್ ಅಪಾಯಿಂಟ್ ಮೆಂಟ್ ಇದ್ರು ಆವತ್ತಿಗೆ ಕಾನ್ಸಲ್ ಮಾಡ್ಬಿಡಿ ಓಕೆನಾ.... ನೆಕ್ಸ್ಟ್ ಡೇ  ಇಡೀ ಯುರೋಪ್ ನೋಡಕ್ಕೆ  ಹೋಗ್ತಾ ಇದ್ದೀವಿ.... ಅವ್ಳಿಗೆ ನಾವೇನು ಕಮ್ಮಿ ಮಾಡಲ್ಲಾ ನಮ್ ಜೀವ ಅವ್ಳೂ ವಿ ವಾಂಟ್ ದ ಬೆಸ್ಟ್ ಪಾರ್ ಅವರ್ ಚೈಲ್ಡ್ .....
 ಅದೇ ಟೈಮಲ್ಲಿ  ನಮ್ ಸೋನು ಪುಟ್ಟಿ ರೂಮಿನ್ ಕಿಟಕಿ ಇಂದ ಎದ್ರಿನ್ ಮನೆಯ ಕೆಲ್ಸದವ್ಳ ಮಕ್ಳು ಚಿನ್ನಿ, ಪುಟ್ಟಿ ಗೋಲಿ ಆಡ್ತಿದ್ದನ್ನ ನೋಡಿ "ಮಮ್ಮಿ ಯಾಕೆ ಅವ್ರ ಜೊತೆ  ಆಡಕ್ ಬಿಡಲ್ಲಾ??? ಥೂ ಈ ರಜೆಲ್ಲು ನನ್ನ ಮಜ ಮಾಡಕ್ ಬಿಡಲ್ಲಾ ಯಾವ್ದೋ ಟ್ರಿಪ್ಪು ಬೋರಿಂಗ್ ಪಾರ್ಟಿ ಅರೇಂಜ್ ಮಾಡಿದಾರೆ....ಅಟ್ಲೀಸ್ಟ್ ಚಿನ್ನಿ ಪುಟ್ಟಿನ ಪಾರ್ಟಿಗೆ ಕರಿಲಾ  ಅಂತ ಮಮ್ಮಿನ್ ಕೇಳ್ಬೇಕು..ಆವಾಗಾದ್ರು ಅವ್ರ ಜೊತೆ ಆಡಕ್ಕಾಗತ್ತೆ" ಅಂತಾ ಮಮ್ಮಿ ಹತ್ರ ಕೇಳಕ್ಕೆ ಹೋದ್ಲು

1 comment:

  1. ಓಹ್. ಹೌದು.. ಒಳ್ಳೆ ಬರಹ :) ಇನ್ನೂ ಚೆನ್ನಾಗಿ ಬರೆಯಬಹುದು :)

    ReplyDelete