Sunday, November 13, 2011

ಚಂದ್ರ.........


ರಾಮು ಮತ್ತವನ ತಾಯಿಗೆ ಮೂರು ದಿನದಿಂದ ಹೊಟ್ಟೆಗೆ ತಣ್ಣೀರೆ ಗತಿ..........
ಸಣ್ಣ ಮಗು ರಾಮು ನಾಲ್ಕನೇ ರಾತ್ರಿ ಹಸಿವು ತಡೆಯಲಾರದೇ ಆಕಾಶದ ಪೂರ್ಣ ಚಂದ್ರನನ್ನು ನೋಡೀ ಅದು ತಿನ್ನಲು ಬೇಕೆಂದು ಹಠ ಮಾಡಿದ..........
ತಾಯಿಗೆ ಆ ಚಂದ್ರನನ್ನು ನೋಡಿ ಇತ್ತೀಚೆಗೆ ಅಗಲಿದ ರಾಮುವಿನ ತಂದೆ ಚಂದ್ರ ಕಾಡಿಸತೊಡಗಿದ..........
ಆ ತಾಯಿಯು "ನಿನಗೆ ಚಂದ್ರ ಬೇಕಾ?? ಹಾಗಾದರೆ ಬಾ ಅವನಲ್ಲಿಗೆ ಹೋಗೋಣ" ಎಂದು ಮನೆಯ ಹಿತ್ತಿಲಲ್ಲಿದ್ದ ಬಾವಿಯ ಚಂದ್ರನನ್ನು ರಾಮುವಿನ ಜೊತೆಗೆ ಸೇರಿದಳು... 

2 comments:

  1. ಅದ್ಭುತ ಕಲ್ಪನೆ.. ಚೆನ್ನಾಗಿ ಸಣ್ಣ ಕಥೆ ಬರೀತೆ.. ಮುಂದುವರೆಸು :-)

    ReplyDelete